ಕಲ್ಯಾಣ ಕರ್ನಾಟಕ (ಹೈದ್ರಾಬಾದ ಕರ್ನಾಟಕ)ದಲ್ಲಿ ಆಳಿ ಹೋದ ಸಂಸ್ಥಾನಗಳ ಅವಶೇಷಗಳನ್ನೊಳಗೊಂಡ ವಸ್ತುಸಂಗ್ರಹಾಲಯ 'ಬಸವಕಲ್ಯಾಣ'ದಲ್ಲಿದೆ. ಬಸವಕಲ್ಯಾಣ ಬೀದರ ಜಿಲ್ಲೆಯ ಒಂದು ತಾಲ್ಲೂಕು ಕೇಂದ್ರ. ಬೀದರದಿಂದ ೮೫.ಕಿ.ಮಿ. ದೂರದಲ್ಲಿದ್ದು ಗುಲಬರ್ಗಾದಿಂದ ಉತ್ತರಕ್ಕೆ ೬೫.ಕಿ.ಮೀ. ದೂರದಲ್ಲಿ ಪೂರ್ವ-ಪಶ್ಚಿಮಕ್ಕೆ ೬೫ನೇ ರಾಷ್ಟ್ರೀಯ ಹೆದ್ದಾರಿ ಬರುತ್ತದೆ.
ಇಲ್ಲಿಂದ ಪಶ್ಚಿಮದಲ್ಲಿದ್ದ ಸಸ್ತಾಪೂರ ಬಂಗ್ಲಾ ಎಂಬ ಗ್ರಾಮದಿಂದ ಉತ್ತರಕ್ಕೆ ೩ ಕಿ.ಮಿ. ಒಳಗೆ ಬಂದರೆ, ರಸ್ತೆ ಬಲಭಾಗಕ್ಕೆ ಬೃಹತ ಆಕಾರದ ಬಸವಣ್ಣ ಕುಳಿತಿರುವ ೧೦೮ ಅಡಿ. ಇರುವ ಮೂರ್ತಿ ಕಾಣುತ್ತದೆ. ಎಡಭಾಗದ ಅಂದರೆ ಪಶ್ಚಿಮದಕಡೆ ಇರುವ ರಸ್ತೆ ಮುಖಾಂತರ ಬಂದರೆ ಎತ್ತರದ ಬೆಟ್ಟ ಏರಿ ಹಾಗೇ ಸ್ವಲ್ಪ ಬೆಟ್ಟದ ಇಳಿಜಾರಿನಲ್ಲಿ ಶ್ರೀ ಜಗದ್ಗುರು ಘನಲಿಂಗ ರುದ್ರಮುನಿ ಶಿವಾಚಾರ್ಯ ಗವಿಮಠ, ಇರುವುದು. ಇದು ಬಸವಕಲ್ಯಾಣ ತಾಲೂಕಿನ ತ್ರಿಪೂರಾಂತ ಗ್ರಾಮದಲ್ಲಿ ಬರುವುದು.
ಈಗ ಈ ಗ್ರಾಮ ಬೆಳೆದು ತಾಲೂಕಿನೊಳಗೆ ಸೇರಿಕೊಂಡಿದೆ.ಈ ಪ್ರದೇಶಕ್ಕೆ 'ಹೈದ್ರಾಬಾದ ಕರ್ನಾಟಕ' ಎಂದು ಕರೆಯುತ್ತಿದ್ದರು. ಈ ಭಾಗಕ್ಕೆ 'ಕಲ್ಯಾಣ ಕರ್ನಾಟಕ' ಕರೆಯಬೇಕೆಂದು ಎಷ್ಟೋ ವರ್ಷಗಳ ಕಾಲ ಹೋರಾಡುವ ಹಲವಾರು ಮಹನಿಯರ ಒತ್ತಾಸೆಯದಮೇರೆಗೆ ಸನ್ಮಾನ್ಯ ಶ್ರೀ ಯಡಿಯೂರಪ್ಪನವರು ಮುಖ್ಯಮಂತ್ರಿಗಳನಾಗಿ ಇದ್ದಾಗ ೨೦೧೯ ಸೆಪ್ಟೆಂಬರ್ ೧೭ರಂದು ಈ ಪ್ರದೇಶಕ್ಕೆ “ಕಲ್ಯಾಣ ಕರ್ನಾಟಕ'ವೆಂದು ಕರೆಯಬೇಕೆಂದು ಅಧಿಕೃತವಾಗಿ ಘೋಷಣೆ ಮಾಡಿದರು.
ಅಂದಿನಿಂದ 'ಹೈದ್ರಾಬಾದ ಕರ್ನಾಟಕ' ಬದಲಾಗಿ 'ಕಲ್ಯಾಣ ಕರ್ನಾಟಕ' ಎಂದು ಕರೆಯತೊಡಗಿದರು.ಶರಣರ ಸ್ಮಾರಕಗಳು ಇರುವವು. ಕೆಲವು ಶಿಲ್ಪಕಲೆಗಳು ಮತ್ತು ವಿವಿಧ ಬಗೆಯ ವಸ್ತುಗಳು ಬಸವಕಲ್ಯಾಣ ವಸ್ತು ಸಂಗ್ರಹಾಲಯದಲ್ಲಿ ತಂದಿಡಲಾಗಿದೆ. ಇಡೀ ಬಸವಕಲ್ಯಾಣ ಹಾಗೂ ತಾಲ್ಲೂಕಿನ ಹಲವಾರು ಗ್ರಾಮಗಳಲ್ಲಿ ಶಿವಶರಣರ ಸ್ಮಾರಕಗಳಿವೆ. ಅವುಗಳಲ್ಲಿನ ಒಂದನ್ನು ಸ್ಮಾರಕ ಆಯ್ದುಕೊಂಡು ಪರಿಚೆಯಸಿದ್ದೇನೆ. ಅದುವೇ “ಶ್ರೀ ಗುರು ಘನಲಿಂಗ ರುದ್ರಮುನಿ ಗವಿಮಠ, ತ್ರಿಪೂರಾಂತ-ಬಸವಕಲ್ಯಾಣ
ಬಸವಕಲ್ಯಾಣ ಗವಿಮಠದ ವಿಹಂಗಮ ನೋಟಶ್ರೀ ಷ|| ಬ್ರ|| ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಗವಿಮಠ ಬಸವಕಲ್ಯಾಣ
ಕಲ್ಯಾಣ ಕರ್ನಾಟಕದ ಬೀದರ ಜಿಲ್ಲೆಯ ಬಸವಕಲ್ಯಾಣ ನಾಡಿನ ಸಂತ , ನಡೆದಾಡುವ ದೇವರು , ಅತ್ಯಂತ ಸರಳ ಜೀವಿಗಳು ,ಸಿದ್ದಾಂತ ಸಿಖಾಮಣಿ ಮತ್ತು ವಚನ ಸಾಹಿತ್ಯ ಭೋದನೆ ಗೈಯುತ್ತಿರುವ ಬಸವಕಲ್ಯಾಣ ಗವಿಮಠದ ಪೀಠಾಧಿಪತಿಗಳಾದ ಶಿವಶರಣರ ದೀಕ್ಷಾ ಸ್ಥಳ ಶ್ರೇಷ್ಠ ಶ್ರೀ ಪ್ರಶಸ್ತಿ ಪುರಸ್ಕೃತರು ಪರಮ ಪೂಜ್ಯ ಶ್ರೀ ಷ|| ಬ್ರ|| ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರ ಪರಿಚಯ
ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ತ್ರಿಪೂರಾಂತ ಗ್ರಾಮದ ಶ್ರೀ ಜಗದ್ಗುರು ಘನಲಿಂಗ ರುದ್ರಮುನಿ ಗವಿಮಠ, ಗುರುಸ್ಥಲ ಮಠವಾಗಿದ್ದು ಅದರಲ್ಲಿ ಗವಿಮಠವು ಪುತ್ರವರ್ಗದ ಮಠವಾಗಿದ್ದು ರಂಭಾಪುರಿ ಪೀಠದ ಶಾಖಾ ಮಠವಾಗಿದೆ. ಈ ಮಠಕ್ಕೆ ಪೂಜ್ಯಶ್ರೀ ಷ.ಬ್ರ. ಡಾ. ಅಭಿನವ ಘನಲಿಂಗ ರುದ್ರಮುನಿ ಶಿವಾಚಾಂರ್ದರನ್ನು ಚಿಕ್ಕ ವಯಸ್ಸಿನಲ್ಲಿಯೇ ಪೀಠಾಧಿಪತಿಯಾಗಿ ನೇಮಿಸಲಾಯಿತು.
ಇವರು, ಹಲವಾರು ಭಕ್ತಾದಿಗಳಿಗೆ ಒಳ್ಳೆಯ ಮಾರ್ಗ ದರ್ಶನ ನೀಡುತ್ತ, ವಿವಿಧ ಕಾರ್ಯಕ್ರಮದಲ್ಲಿ ಭಾಗವಹಿಸುತ್ತ ಬರುತ್ತಿದ್ದಾರೆ. ಇವರು ೧೯೮೬ ಸೆಪ್ಟೆಂಬರ್ ೨೮ ರಂದು ಚೆನ್ನಮ್ಮ, ರುದ್ರಮುನಿ ದಂಪತಿಗಳ ಉದರದಲ್ಲಿ ಜನಿಸಿದರು. ಇವರ ಜನ್ಮ ನಾಮ ಇವರಿಗೆ ದೀಪಯ್ಯ ಎಂದು ನಾಮಕರಣ ಮಾಡಲಾಯಿತು. ದೀಪಯ್ಯ ಅವರ ಪ್ರಾಥಮಿಕ ಶಿಕ್ಕಣ, ಕಲಬುರಗಿಯ ಮಹಾಜನ ಮಠದಲ್ಲಿ ಮುಗಿಸಿ, ಪ್ರೌಢ ಶಿಕ್ಷಣ " ಮಾಯಾ ಬಾಲ್ ವಿದ್ಯಾ ಮಂದಿರ” ಕಲಬುರಗಿ (ಗುಲಬರ್ಗಾ)ಯಲ್ಲಿ ವಿದ್ಯಾಭ್ಯಾಸ ಮಾಡಿದರು. ಘನಲಿಂಗ ರುದ್ರಮುನಿ ಗವಿ ಮಠಕ್ಕೆ “ಮರಿದೇವ ಗುಡ್ಡ"ಎಂತಲೂ ಕರೆಯುತ್ತಾರೆ. ಬಹುಶಃ ಮಠದ ಪರಂಪರೆಯಲ್ಲಿ ಮರಿದೇವರೆಂಬುವರು ಇದ್ದಿರಬೇಕೆಂದು ತಿಳಿಯುತ್ತದೆ. ಆದ್ದರಿಂದ ದಿನಾಂಕ: ೧೧-೦೯-೧೯೯೭ರಂದು ಸಾವಿರಾರು ಜನಸ್ತೋಮದಲ್ಲಿ ಶ್ರೀ ಮದ್ ರಂಭಾಪುರಿ, ಶ್ರೀಮದ್ ಕೇದಾರ ಜಗದ್ಗುರುಗಳ ನೇತೃತ್ವದಲ್ಲಿ, “ದೀಪಯ್ಯ” ಅವರಿಗೆ ಶ್ರೀ ಪಂಚಾಕ್ಷರಿ ಮರಿದೇವರೆಂದು ೧೧ನೇ ವಯಸ್ಸಿಗೆ ಮರು ನಾಮಕರಣ ಮಾಡಲಾಯಿತು.
ಮುಂದೆ ರಂಭಾಪುರಿ ಪೀಠದಲ್ಲಿ ವೈದಿಕ ಅಭ್ಯಾಸ ಮಾಡಲಾಯಿತು. ತದನಂತರ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಹೊನ್ನಳಿಯ ಹಿರೇಕಲ್ಮಠದಲ್ಲಿ ಪಿ.ಯು.ಸಿ ಯಲ್ಲಿ ಪ್ರವೇಶ ಪಡೆದು ಸಂಸ್ಕೃತದಲ್ಲಿ ಕಾವ್ಯ ಮಾಡಿರುತ್ತಾರೆ. ನಂತರ ರಾಣೆಬೆನ್ನೂರಿನ ವಾಗೀಶ ಪಂಡಿತ ರಾಧ್ಯ ಧಾರ್ಮಿಕ ಪಾಠ ಶಾಲೆಯಲ್ಲಿ ಜೋತಿಷ್ಯ ಶಾಸ್ತ್ರ ಮಾಡಿ, ಮೈಸೂರಿನ ಜೆ.ಎಸ್.ಎಸ್. ಮಹಾವಿದ್ಯಾಲಯದಲ್ಲಿ ಬಿ.ಎ. ಪದವಿ ಪಡೆದಿರುತ್ತಾರೆ. ಹಾಗೆ ಮೈಸೂರುನಲ್ಲಿಯೇ ಸಂಸ್ಕೃತದಲ್ಲಿ ಸಾಹಿತ್ಯ ಅಭ್ಯಾಸ ಮಾಡಿದ್ದಾರೆ. ಹೀಗಾಗಿ ಶ್ರೀಗಳು ಶ್ರೀ ಭಾಷಾ ಜ್ಞಾನವನ್ನುಳ್ಳುವರಾಗಿದ್ದಾರೆ. ಒಮ್ಮೆ ಜಗದ್ಗುರುಗಳೇ ಫೋನ್ ಮಾಡಿ ಬರುವ ಸೆಪ್ಟೆಂಬರ್ ೨೮ರಂದು ನಾನು ಬರುವೆ ನಂದು ಸೂಚಿಸಿದರು. ದಿನಾ೦ಕ ಪ೦ಚಾಕ್ಷರಿ ಮರಿದೇವರು(ದೀಪಯ್ಯ)ನವರು ಹುಟ್ಟಿರುವ ದಿನಾಂಕವನ್ನೇ ನೇಮಿಸಿರುವದು ತಿಳಿದು ಎಲ್ಲರೂ ಆಶ್ಚರ್ಯಗೊಂಡರು. ಹೀಗಾಗಿ ಜನ್ಮದಿನದಂದೇ ಪಟ್ಟಾಭಿಷೇಕವಾದವರೆಂದರೆ ಮುಂದೆ ಈ ವ್ಯಕ್ತಿ ಮಹಾನ್ ವ್ಯಕ್ತಿ ಆಗಬಲ್ಲರೆಂಬ ಜನಾಭಿಪ್ರಾಯವಾಗಿದೆ.
ಪತ್ರಿಕಾ ಪ್ರಕಟಣೆಗಳು
Gallery
ಸಂಪರ್ಕಿಸಲು ವಿವರಗಳು
ಗವಿಮಠದ ವಿಳಾಸ
ಶ್ರೀ ಜಗದ್ಗುರು ಘನಲಿಂಗ ರುದ್ರಮುನಿ ಶಿವಾಚಾರ್ಯ ಸಂಸ್ಥಾನ ಗವಿಮಠ ಸುಕ್ಷೇತ್ರ ಬಸವಕಲ್ಯಾಣ - 585 327
Email Us
mail@basavakalyangavimath.com
Call Us
+91 9886160800